ಸಾಹಿತ್ಯ, ಕಲೆ, ಸಂಸ್ಕೃತಿಗಳ ಜೊತೆಗಿನ ಅನುಸಂಧಾನದ ಒಂದು ಪ್ರಯೋಗ ಕೊನರು. ಸಮಾನ ಆಸಕ್ತಿ ಹಾಗೂ ಸಮಾನ ತಲ್ಲಣಗಳನ್ನು ಹೊಂದಿದಂಥ ಒಂದಷ್ಟು ಸ್ನೇಹಿತರು ಸೇರಿ ಇದೇ ದೀವಳಿಗೆಯ ದಿನ ಇದನ್ನು ಶುರು ಮಾಡಿದ್ದೇವೆ. ಕೊನರುವಿನ ಸುತ್ತಲೂ ಒಂದು ಸಮುದಾಯವನ್ನು ಬೆಳೆಸಿ ಕನ್ನಡದ ಮನಸ್ಸಿನೊಂದಿಗೆ ಅರ್ಥಪೂರ್ಣವಾಗಿ ತೊಡಗಿಕೊಳ್ಳಬೇಕೆಂಬುದು ನಮ್ಮ ಹಂಬಲವಾಗಿದೆ.
ಸಾಹಿತ್ಯದ ಓದಿನಿಂದ ನಮಗಾದ ಹಿಗ್ಗು ಸಂಕಟಗಳನ್ನು, ದಕ್ಕಿದ ಒಳನೋಟಗಳನ್ನು ಒಂದಷ್ಟಾದರೂ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನದ ಮೂಲಕ ಇದರ ಶುರುವಾತು ಮಾಡಿದ್ದೇವೆ. ಪುಸ್ತಕ ಪರಿಚಯ, ಕವಿತೆ, ಅನುವಾದ, ವಿಮರ್ಶೆ, ಪ್ರಬಂಧ, ಸಂದರ್ಶನ, ನುಡಿಚಿತ್ರ, ಪಾಡ್‌ಕಾಸ್ಟ್, ಇವುಗಳ ಮೂಲಕ ಆದಾಗ ಆಗಾಗ ನಿಮ್ಮನ್ನು ಎದುರುಗೊಳ್ಳುತ್ತೇವೆ. ಇವುಗಳನ್ನು ಕಿರುಪತ್ರದ ಮಾದರಿಯಲ್ಲಿ ಇ-ಮೇಲ್ ಮೂಲಕ ತಲುಪಿಸುತ್ತೇವೆ. (ನಿಮ್ಮ ಮೊಬೈಲ್‌ನಲ್ಲಿ Substack app install ಮಾಡಿಕೊಂಡರೆ ಅದರಲ್ಲಿ ಕೂಡ ಓದಬಹುದು.)
ಕೆಳಗೆ ತಮ್ಮ ಇ-ಮೇಲ್ ಐಡಿ ಹಾಕಿ subscribe ಮಾಡಿಕೊಳ್ಳಿ.
ಮುಂದಿನ ದಿನಗಳಲ್ಲಿ ಕೊನರು ಸಾಹಿತ್ಯವಷ್ಟೇ ಅಲ್ಲದೇ ಇತರ ಕ್ಷೇತ್ರಗಳಿಗೂ ಹಬ್ಬುತ್ತದೆ ಎಂಬ ಆಶಯವಿದೆ.
ಕೊನರು ತಂಡ