ಏನಿದು ಕೊನರು?
ಸಾಹಿತ್ಯ, ಕಲೆ, ಸಂಸ್ಕೃತಿಗಳ ಜೊತೆಗಿನ ಅನುಸಂಧಾನದ ಒಂದು ಪ್ರಯೋಗ ‘ಕೊನರು’. ಸಮಾನ ಆಸಕ್ತಿ ಮತ್ತು ಸಮಾನ ತಲ್ಲಣಗಳನ್ನು ಹೊಂದಿದಂಥ ಒಂದಷ್ಟು ಸ್ನೇಹಿತರು ಸೇರಿ ಇದನ್ನು ಶುರು ಮಾಡಿದ್ದೇವೆ. ಸಾಹಿತ್ಯದ ಓದಿನಿಂದ ನಮಗಾದ ಹಿಗ್ಗು ಸಂಕಟಗಳನ್ನು ಒಂದಷ್ಟಾದರೂ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ನಮ್ಮದು. ಹಾಗಾಗಿ ಪುಸ್ತಕ ಪರಿಚಯ, ವಿಮರ್ಶೆ, ಕವಿತೆ, ಅನುವಾದ, ಸಂದರ್ಶನ, ಸಂವಾದ, ಪಾಡ್‌ಕ್ಯಾಸ್ಟ್ ಮತ್ತು ಇನ್ನಿತರ ಸೃಜನಾತ್ಮಕ ಪ್ರಸ್ತುತಿಗಳ ಮೂಲಕ ನಿಮ್ಮನ್ನು ಆಗಾಗ ಆದಾಗ ಎದುರುಗೊಳ್ಳುತ್ತಿರುತ್ತೇವೆ.
ಸದ್ಯಕ್ಕೆ ಕಿರುಪತ್ರದ ಮಾದರಿಯಲ್ಲಿ ಇ-ಮೇಲ್ ಮೂಲಕ ನಿಮ್ಮನ್ನು ತಲುಪುತ್ತೇವೆ. (ನಿಮ್ಮ ಮೊಬೈಲ್‌ನಲ್ಲಿ Substack app install ಮಾಡಿಕೊಂಡರೆ ಅದರಲ್ಲಿ ಕೂಡ ಓದಬಹುದು.)
ಕೆಳಗೆ ತಮ್ಮ ಇ-ಮೇಲ್ ಐಡಿ ಹಾಕಿ subscribe ಮಾಡಿಕೊಳ್ಳಿ. Subscription ಉಚಿತ.
Subscribe for free to get full access to the newsletter and publication archives.
ಮುಂದಿನ ದಿನಗಳಲ್ಲಿ ಕೊನರು ಸಾಹಿತ್ಯವಷ್ಟೇ ಅಲ್ಲದೇ ಇತರ ಕ್ಷೇತ್ರಗಳಿಗೂ ಹಬ್ಬುತ್ತದೆ ಎಂಬ ಆಶಯವಿದೆ.
