4 Comments
User's avatar
Neelakanth Kulkarni's avatar

ಈ ಕತೆಯನ್ನು ಗರ್ಭವಾಗಿಸಿಕೊಂಡ ನಿಮ್ಮೀ ಲೇಖನದಲ್ಲಿ ನಿಮ್ಮ ಆಶಯ, ಅನ್ವೇಷಣೆ ಅರ್ಥವಾಯಿತು, ಮನವರಿಕೆ ಆಯಿತು. ಆದರೆ ಅದು ತಾನೇ ತಾನಾಗಿ ಅಭಿವ್ಯಕ್ತವಾಗಲು ಈ ಕತೆಯಲ್ಲಿ ಇನ್ನೊಂದಿಷ್ಟೇನಾದರೂ ಇರಬೇಕಿತ್ತೇ, ವ್ಯಾಖ್ಯಾನಸಾಪೇಕ್ಷವಾಯಿತೇ ಎಂಬ ಕೊರತೆಯ ಕಾಟ ನನಗೆ. ನಿಮಗೆ ಅದು ದೊರೆತಿದೆ ಎಂಬುದು ಸಂತೋಷ. ರಸಪರಿವೇಷದ ಪರಿಧಿಯ ಮಿತಿಯಲ್ಲೇ ಲೇಖಕ, ಕತೆಗಾರ ಎಷ್ಟೆಷ್ಟು ಹೆಚ್ಚು ಜನರಿಗೆ ತಲುಪುವ ಹಾಗೆ ಎಷ್ಟರ ಮಟ್ಟಿಗೆ ಬರೆಯಬಲ್ಲ ಎಂಬುದೊಂದು ಯೋಚನೀಯ ಅಂಶ. ಅದರ ಇನ್ನೊಂದು ಮಗ್ಗುಲಿನ ತವಕವೇ ನಾನು ಆ ಮಟ್ಟದ ಕೃತಿಯನ್ನು ಆಸ್ವಾದಿಸಬಲ್ಲ ಸಹೃದಯರ ಪೈಕಿ ಇದ್ದೇನೆಯೇ ಎಂಬ ಪ್ರಶ್ನೆಯೂ ಕೂಡ! ಇಲ್ಲವೆಂದವರಿಗೆ ನಿಮ್ಮಂಥವರು ದಾರಿದೀವಿಗೆ. ಧನ್ಯವಾದಗಳು.

Expand full comment
Sanket's avatar

ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಇಲ್ಲಿ ನಾನು ಕೊಟ್ಟ ವ್ಯಾಖ್ಯಾನ ಸರಿಯೆಂದೂ ಅಲ್ಲ, ಅವಶ್ಯಕವೆಂದೂ ಅಲ್ಲ. ನನಗೆ ಏನೋ ದೊರೆತಿದ್ದೇ ಆದರೆ ಅದೊಂದು ಬೋಧೆ, ಒಂದು ಹೊಳಹು, ಓದಿದಾಕ್ಷಣ ಅನ್ನಿಸಿದ್ದು, ಅಷ್ಟೇ. ಅರ್ಥ ಎನ್ನುವುದೇನಾದರೂ ಇದ್ದರೆ ಅದು ಅಪೇಕ್ಷಣೀಯವೂ ಆಗಿದ್ದರೆ ಅದು ತಾನಾಗಿಯೇ ಅಭಿವ್ಯಕ್ತವಾಗಬೇಕೇ, ಅದನ್ನು ಓದುಗರ ನಿರ್ವಚನೆಗೆ ಬಿಡಬೇಕೇ ಮೊದಲಾದುವು, ಒಳ್ಳೆಯ ಪ್ರಶ್ನೆಗಳೇ. ಇದರ ಜೊತೆಗೇ ಬರಹಗಾರರ ಆಯ್ಕೆ ಎಂಬುದೂ ಇರುತ್ತದಲ್ಲ. ಅದು ಮುಖ್ಯ. ಇಷ್ಟರ ಮೇಲೆ ಅದು ಎಷ್ಟು ಜನರಿಗೆ ಹೇಗೆ ತಲುಪಿತು ಎನ್ನುವುದು ಬರಹಗಾರರ ಕೈಮೀರಿದ ಮಾತು.

ಬರುತ್ತಲಿರಿ. ಮತ್ತೆ ಸಿಗುವ. ನಮಸ್ಕಾರ.

Expand full comment
Sanket's avatar

ಪದ್ಯ ಪದವಿಲ್ಲದಿರಬೇಕು

ಹೆಜ್ಜೆಗುರುತು ಇಲ್ಲದೆ ಪಕ್ಷಿ ಹಾರುವಂತೆ

ಕಾಲದಲ್ಲಿ ಸ್ತಬ್ಧ ಎನ್ನಿಸಬೇಕು

ಏರುವ ಚಂದ್ರನಂತೆ

ಹೇಳಕೂಡದು

ಇರಬೇಕು.

* ಯು.ಆರ್.ಅನಂತಮೂರ್ತಿ

Expand full comment
Neelakanth Kulkarni's avatar

ಏನಿಲ್ಲವೆಂದಂದು ಸುಮ್ಮನಿರಲಾಗದಲ್ಲ

ಹಾರಲಾದರು ಬೇಕಲ್ಲ ಹಕ್ಕಿ ರೆಕ್ಕೆ ಬಡಿದು!

ಹೆಜ್ಜೆಗುರುತಿಲ್ಲದಿರಬಹುದು ಹಕ್ಕಿ ಹಾರಿದಾಗೆಲ್ಲ

ಹಾರುಹಾದಿಯ ಗೀಟು ಮನದಿ ವಿನ್ಯಸ್ತವಾಗುವುದಲ್ಲ!

* ನೀಲಕಂಠ ಕುಲಕರ್ಣಿ

Expand full comment